ಸಾಧನೆಯೇ ಗುರುತು, ಸೇವೆಯೇ ಧ್ಯೇಯ.
ಉತ್ತರಕರ್ನಾಟಕ ಭಾಗದ ಸಾಂಸ್ಕೃತಿಕ ರಾಜಧಾನಿ, ಶಾಲ್ಮಲೆ ಯ ಉಗಮ ಸ್ಥಾನ ನಮ್ಮ ಧಾರವಾಡ.ಅತ್ತ ಅತೀ ಬಿಸಿಲಿನ ತಾಪಕ್ಕೆ ಒಳಗಾಗದೆ ಇತ್ತ ತಂಪಿನ ವಾತಾವರಣವಕ್ಕೂ ಸಿಲುಕಿಕೊಳ್ಳದೆ,ಮಲೆನಾಡು ಮತ್ತು ಬಯಲು ಪ್ರದೇಶಗಳಿಗೆ ರಹದಾರಿಯಾಗಿ ಮದ್ಯಮ ಹಿತಕರ ವಾತಾವರಣ ದಿಂದ ಕೂಡಿದ ಧಾರವಾಡ,ಅನೇಕ ಹೆಮ್ಮೆಯ,ಐತಿಹಾಸಿಕ ಘಟನೆಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿದೆ.ವರಕವಿ ಬೇಂದ್ರೆ ಅವರ ನೆಚ್ಚಿನ ತಾಣವಾಗಿ ಅನೇಕ ಪ್ರಸಿದ್ಧ ಕವಿ,ಲೇಖಕ, ವಾಗ್ಮಿಗಳ,ಸಾಮಾಜಿಕ ಹೋರಾಟಗಾರರ ಕಾರ್ಯ ಸ್ಥಳವಾಗಿ ಅವರ ಅನೇಕ ಸಾಧನೆಗಳಿಗೆ ಇಂಬು ನೀಡಿದೆ.ಭೀಮಸೇನ್ ಜೋಶಿ,ಮಲ್ಲಿಕಾರ್ಜುನ ಮನ್ಸೂರ್,ಕೀರ್ತಿನಾಥ ಕುರ್ತಕೋಟಿ,ಆರ್.ಸಿ.ಹಿರೇಮಠ್,ಶಾಂತಾದೇವಿ ಮಾಳವಾಡ,ಶಾಂತಿನಾಥ ದೇಸಾಯಿ,ಗಿರಡ್ಡಿ ಗೋವಿಂದರಾಜ, ಸ.ಶಿ,ಭೂಸನೂರಮಠ,ಗಂಗೂಬಾಯಿ ಹಾನಗಲ್,ಅಂತಹ ಸಾಹಿತ್ಯ,ಸಂಗೀತ ಕ್ಷೇತ್ರದ ದಿಗ್ಗಜರ ನ್ನು ನಾಡಿಗೆ ಕೊಡುಗೆಯನ್ನಾಗಿ ನೀಡಿದೆ..
ಅರಸಿ ಬಂದವರಿಗೆಲ್ಲ ಆಶ್ರಯ ನೀಡಿ ಸನಿಹ ಬಂದ ಪ್ರತಿಭೆಗಳನ್ನು ಕೈ ಹಿಡಿದು ನಡೆಸುವ ಊರಿದು ಧಾರವಾಡ.ಇಂತಹ ಸ್ಥಳದಲ್ಲಿ ಇತ್ತೀಚೆಗೆ ಸಕ್ರಿಯರಾಗಿರುವ ಶಿಕ್ಷಣ ಕ್ಷೇತ್ರ,ಚಿತ್ರಕಲೆ,ಮನೋರಂಜನೆ ಕಾರ್ಯಕ್ರಮ, ಮಾದ್ಯಮ ಕ್ಷೇತ್ರ,ಸಂಗೀತ ಕ್ಷೇತ್ರ,ಮತ್ತು ಸಾಹಿತ್ಯ ಹೀಗೆ ಹಲವು ರಂಗಗಳಲ್ಲಿ ತಮ್ಮದೇ ಛಾಪನ್ನು ಮೂಡಿಸುತ್ತಿರುವ ಬಹುಮುಖ ಪ್ರತಿಭೆ
ಶ್ರೀ ರಾಜೇಂದ್ರಕುಮಾರ ಮಠ ಅವರೂ ಒಬ್ಬರು.
ಮೂಲತಃ ಐತಿಹಾಸಿಕ ಸ್ಥಳ ವಿಜಯಪುರ ಜಿಲ್ಲೆಯವರಾಗಿದ್ದು ಜನಿಸಿದ್ದು ತಾಳಿಕೋಟಿಯಲ್ಲಿ. ಇಂಗ್ಲಿಷ್ ಭಾಷೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಇವರು ನಂತರ ಉದ್ಯೋಗವನ್ನರಿಸಿ ಬಂದಿದ್ದು ವಿದ್ಯಾಕಾಶಿಯಾದ ಧಾರವಾಡಕ್ಕೆ. ಪ್ರತಿಷ್ಠಿತ ಕರ್ನಾಟಕ ಕಲಾ ಮಹಾವಿದ್ಯಾಲಯ(ಕೆ.ಸಿ.ಡಿ)
ಯಲ್ಲಿ
ಉಪನ್ಯಾಸಕರಾಗಿ ವೃತ್ತಿಯನ್ನು ಪ್ರಾರಂಭಿಸಿ ಇವರು ಇದೀಗ ತಮ್ಮದೇ ಆದ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿ ಪ್ರಾರಂಭ ಮಾಡಿದ್ದಾರೆ. ವಿಷಯದಲ್ಲಿನ ಪ್ರಭುತ್ವ, ಮಾತಿನಲ್ಲಿನ ಚತುರತೆ,ವಿದ್ಯಾರ್ಥಿಗಳ ಮೇಲಿನ ಕಾಳಜಿ,ವೃತ್ತಿಪರತೆಯ ಗುಣಗಳಿಂದ ಮೆಚ್ಚಿನ ಉಪನ್ಯಾಸಕರಾಗಿದ್ದಾರೆ.ಹಾಸ್ಯಮನದವರಾದ ರಾಜೇಂದ್ರಕುಮಾರ್ ಮಠ ಅವರು ಇದ್ದಡೆಯಲ್ಲಿ ನಗುವಿಗೆನು ಕೊರತೆ ಇರುವುದಿಲ್ಲ.
ವಿದ್ಯಾರ್ಥಿ ದೆಸೆಯಿಂದಲೇ ಅನೇಕ ಸಂಘ ಸಂಸ್ಥೆಗಳ ಪದಾಧಿಕಾರಿ ಯಾಗಿ ಕಾರ್ಯನಿರ್ವಹಿಸುತ್ತಾ ಬಂದ ಇವರು ಉತ್ತಮ ಸಂಘಟಕರೂ ಹೌದು.ಕ ರ.ವೇದಿಕೆಯ ಸಕ್ರಿಯ ಸದಸ್ಯರಾಗಿರುವ ಇವರು ' ಜನಲೋಕಪಾಲ್ ಮಸೂದೆಗಾಗಿ 9 ದಿನಗಳ ಕಾಲ ನಡೆದ ಉಪವಾಸ ಸತ್ಯಾಗ್ರಹ ಹೋರಾಟದಲ್ಲಿ ಅಣ್ಣಾ ಹಜಾರೇ,T.N. ಸೀತಾರಾಂ,ದೊರೆಸ್ವಾಮಿ,ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರೊಂದಿಗೆ ಭಾಗವಹಿಸಿದ್ದಾರೆ.ಮತ್ತು ರಾಜ್ಯ ಹೆದ್ದಾರಿ ಸಲುವಾಗಿ 23 ದಿನಗಳ ಕಾಲ ನಡೆದ ಉಪವಾಸ ಸತ್ಯಗ್ರಹದಲ್ಲಿಯು ಪ್ರಮುಖ ಪಾತ್ರ ವಹಿಸಿದ್ದಾರೆ.. ಲಯನ್ ಕ್ಲಬ್ ದ ಸದಸ್ಯರಾಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ವ್ಯಕ್ತಿತ್ವ ವಿಕಸನ ದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ.ಪ್ರಸ್ತುತ ನವಿಲುಗರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ.
ವೃತ್ತಿಯಲ್ಲಿ ಇಂಗ್ಲಿಷ್ ಉಪನ್ಯಾಸಕರಾದರೂ ಕನ್ನಡ ಭಾಷೆಯ ಮೇಲಿನ ಅತಿಯಾದ ಒಲವು ಅವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರನ್ನಾಗಿಸಿದೆ.ರೇಡಿಯೋ ಗಿರ್ಮಿಟ್,ಕೃಷಿ ಬಾನುಲಿ ಕೇಂದ್ರದಲ್ಲಿ ಉಪನ್ಯಾಸಗಳನ್ನು ನೀಡುವುದು ಮಾತ್ರವಲ್ಲದೆ ಕವನ ವಾಚನಗಳನ್ನು ಮಾಡಿದ್ದಾರೆ.ಉದಯ ಟಿವಿ ಯಲ್ಲಿ ಪ್ರಸಾರವಾಗುವ ಹರಟೆ ಕಾರ್ಯಕ್ರಮದಲ್ಲಿ ಹಲವಾರು ಬಾರಿ ಭಾಗಿಯಾಗಿದ್ದಾರೆ . ಚಂದನವಾಹಿನಿ,ಆಯುಷ್,ಸುವರ್ಣ,ದಿಗ್ವಿಜಯ್ ಮುಂತಾದವುಗಳಲ್ಲಿ ಸಂದರ್ಶನ ಕಾರ್ಯಕ್ರಮ ನೀಡಿದ್ದಾರೆ.
39 ಕ್ಕಿಂತಲು ಹೆಚ್ಚು ಬಾರಿ ರಕ್ತದಾನ ಮಾಡಿದ್ದಾರೆ
ಉದ್ಯಮದಲ್ಲೂ ತೊಡಗಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಇವರು ಅನೇಕ ಬಡ ಹಿನ್ನಲೆ ಯಲ್ಲಿ ಬರುವಂತಹ ವಿದ್ಯಾರ್ಥಿ ಗಳನ್ನು ಗುರುತಿಸಿ ಅವರ ವಿದ್ಯಾಭ್ಯಾಸಕ್ಕೆ ಸಹಾಯ ಹಸ್ತ ಚಾಚಿದ್ದಾರೆ.ತಮ್ಮದೇ ಆದ ಒಂದು ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುವ ಅದಮ್ಯ ಕನಸನ್ನು ಹೊಂದಿರುವ
ಶ್ರೀ ರಾಜೇಂದ್ರಕುಮಾರ ಮಠ ಆಸೆ ಆದಷ್ಟು ಬೇಗನೆ ನೆರವೇರಲಿ ಎಂದು ಹಾರೈಸಿ......ತಮ್ಮ ಅಭಿಪ್ರಾಯಕ್ಕೆ ಸ್ವಾಗತ
9449191822
rajendramath176@gmail.com
ಜಯ ನಗರ, ಕೆ.ಯು .ಡಿ ಮುಖ್ಯ ರಸ್ತೆ, ಧಾರವಾಡ -580003
Provide details below to connect for consultation.
Scan to visit our website instantly.
Scan to message us directly on WhatsApp.